ಕಾದು ಕರ್ರಗಾದ
ಮೇಘಮಾಲೆಯು
ಜಿನುಜಿನುಗೋ
ಜಿಟಿಜಿಟಿ ಮಳೆಯು
ಚಟಪಟ ಸದ್ದಾಗಿ
ಭೂಮಿಗೆ ಬಿದ್ದಾಗ
ಜುಳುಜುಳು ನಾದದಿ
ನದಿಯನು ಸೇರುಲು
ದಡಬಡ ಸಾಗುತಿರಲು
ಆಣೆಯಕಟ್ಟು ಅಡ್ಡಬರಲು
ಹರಿವ ದಿಕ್ಕು ಬದಲಾಗಲು
ಕಾಲುವೆ ನೆರವಾಗಲು
ನದಿ ಮಂದೆಸಾಗಿತು
ಎತ್ತರ ಜಾಗಕೆಬಂದಿತು
ನೇರ ಧುಮುಕಿತು
ಅದು ಜಲಪಾತವೆನಿಸಿತು