Friday, 6 January 2012

ಇಂದಿನ ಲೈಫು

ಕಣ್ಣಿನ ಮಾತುಗಳು
ಮನಸಿನ ನೋಟಗಳು
ಹೃದಯದ ಭಾವಗಳು
ಒಂಥರಾ ಒಗಟುಗಳು

ಮುಚ್ಚಿಡೋ ಪ್ರೀತಿಗಳು
ಕೆಲ ಹುಡುಗರ ಮನಸುಗಳು
ಹುಡುಗೀಯರ ಮುನಿಸುಗಳು
ಒಂಥರಾ ಒಗಟುಗಳು

ರಾತ್ರಿಯಿಡಿ ಮೆಸೇಜ್ ಗಳು
ಫ್ರೀ ಇದ್ರೆ ಫೋನ್ ಕಾಲ್ ಗಳು
ಓನ್ ಲೈನ್ ಚಾಟ್ ಗಳು
ಒಂಥರಾ ಒಗಟುಗಳು

ಬಾಯ್ ಫ್ರೆಂಡ್ ತರಲೆಗಳು
ಗರ್ಲ್ ಫ್ರೆಂಡ್ ನ ಅಳುಮುಂಜಿ ಮುಖಗಳು
ಪಾರ್ಕ ನಲ್ಲಿ ಲವ್ ಕಪಲ್ ಗಳು
ಒಂಥರಾ ಒಗಟುಗಳು

ಅತ್ತ ಲಕ್ಷಕೊಟ್ರೆ ಲವ್ ಬಿಡ್ತೀನಿ
ಇತ್ತ ಪ್ರೀತಿಗಾಗಿ ಪ್ರಾಣ ಕೊಡ್ತೀನಿ
ಬೇಸತ್ತ ಪ್ರೇಮಿಗಳ ಪಾಡುಗಳು
ಒಂಥರಾ ಒಗಟುಗಳು

ಕಷ್ಟ ಪಟ್ಟು ಇಷ್ಟಪಟ್ಟೋರ ಜೊತೆ ಮದುವೆ
ಆಗುವಳು ಕಿರುಕುಳ ತಾಳಲಾರದೇ ವಿಧವೆ
ವಿಚ್ಚೇದನ ಪತಿಪತ್ನಿಯ ಜೀವಂತ ಸಮಾಧಿಯೆನ್ನಲೇ
ಇದೂ ಒಂಥರಾ ಒಗಟುಗಳು

ಹೈಟೆಕ್ ಬಸ್ಸಲ್ಲಿ ಕುಳಿತು
ಪಲ್ಸರು ಬೈಕನ್ನ ನೋಡುತಾ
ಪ್ರಿಯಕರನ ಬಯಸೋ ಮನಸುಗಳು
ಒಂಥರಾ ಒಗಟುಗಳು

ಅರ್ಥಸಲ್ಲದ ಹರಟೆಗಳು
ಕಾಲದೂಡುವ ಪ್ರೀತಿಗಳು
ನಿಜವಲ್ಲದ ಕೆಲ ಕಪಟಗಳು
ಒಂಥರಾ ಒಗಟುಗಳು

ಮನದ ಪುಟಗಳ ಕೆಳಗಿಳಿದು
ಪ್ರತೀ ಪುಟದ ನೆನಪ ಕರೆದು
ಮಿದುಳೆಂಬ ಮಿಷನ್ಗೆ ಕೆಲಸಕೊಟ್ಟು
ಬಿಡಿಸಲಾಗದೇ ಬಿಟ್ಟ ಒಗಟುಗಳು

No comments:

Post a Comment