Friday, 27 January 2012

ಒಲವು ತುಂಬಿ ಕವಿತೆಯ ಮೂಡಿತು
ನೆನಪು ಅದರಲಿ ಪದಗಳ ತುಂಬಿತು
ಮೌನರಾಗವು ಮನಬಿಚ್ಚಿ ಹಾಡಿತು
ಅದರಾಲಾಪನೆ ಇಂದು ನನ್ನ ಕಾಡಿತು

ಕೋಟಿವರುಷದ ತಪಸಿನ ಫಲವೋ
ಎಂಟುಸಾವಿರ ದಿನಗಳ ಛಲವೊ
ಅಥವಾ ನನ್ನ ಮನದ ಒಲವೊ
ಸೆಳೆದೆ ನೀನು ಅಂದು ನನ್ನ ಮನವ

ಎಲ್ಲರು ಬೇಡುವ ದೇವರ ಬೇಡುವೆ
ಹೇಳು ನೀನು ಎಂದು ನನ್ನ ಸೇರುವೆ
ಏಕೆ ಬಂದು ನೆನಪಲಿ ಕಾಡುವೆ
ತಿಳಿಸು ತೀರ್ಪನು ಪ್ರೀತಿಯ ಸೋಲೆ ಗೆಲುವೆ

ಕೂಡಿ ಕಳೆದರೂ ಇಷ್ಟೇ ಜೀವನ
ಪ್ರೀತಿ ಸಿಕ್ಕರೆ ಮಾತ್ರ ಬಾಳು ಚೆನ್ನ
ಪ್ರೀತಿ ನೆನಪಲಿ ಬರೆದೆ ನಾ ಈ ಕವನ
ತಿಳಿಸಿ ನಿಮ್ಮ ಪ್ರತಿಕ್ರಿಯೆಯನ್ನ

No comments:

Post a Comment