ಮನಮುಗಿಲ್ಲಿ ನೀನು
ಮಧುವಾಗಿ ಬಂದು
ಪ್ರೇಮ ಸುಧೆಯನಿತ್ತು
ಎತ್ತಹೋದೆಯೋ ನಲ್ಲ ನೀನು
ಬಯಕೆಯ ಸಪ್ತಸಾಗರದೋಳು ನಿಂತು
ಪ್ರೇಮ ಭಿಕ್ಷೆ ಬೇಡಿದ ನನಗೆ ನೀನು
ರುಚಿಗೊಂದು ತೊಟ್ಟು ಇತ್ತು
ಎತ್ತ ಹೋದೆಯೋ ನಲ್ಲ ನೀನು
ನೆನಪಾಗಿ ಕನಸೊಳು ಬಂದು
ಜೇನಂತ ಅಧರವೆನುತಾ
ಮೃದುವಾದ ಮುತ್ತಿಟ್ಟು
ಎತ್ತ ಹೋದೆಯೋ ನಲ್ಲ ನೀನು
ಮೆತ್ತ ಮೆತ್ತಗೆ ಬಂದು
ಮುತ್ತಿಟ್ಟು ಹೋದ ನೀ
ಮತ್ತೆಂದು ಬರುವೆ ನೀನೀಗ
ಎತ್ತ ಹೋದೆಯೋ ನಲ್ಲನೆ
No comments:
Post a Comment