ನೀನಾರು
ನೆನಪಿಂದ ನೆನಪಿಗಾಗಿ
ನೆನಪುಮಾಡೋ ನೆನಪಾಗದ
ನೆನಪಲ್ಲ ಇರುವ ನೆನಪಾಗಿ
ಕಾಡುವ ಮಧುರ ನೆನಪೇ ನೀನಾರು
ಮನಸಲ್ಲಿ ಮನಸಿಲ್ಲದೇ
ಮನಸುಮಾಡೆಂದು ಮನಸಕೇಳುತಾ
ಮನಸನ್ನ ಮನಸಿಂದ
ಕೆದಕುವ ಮನಸೆ ನೀನಾರು
ನಗುವಿಲ್ಲದೆ ನಗಲಾರದೇ
ನಗುವಾಗ ನಗುವಾಗಿ ಬಂದು
ನಗುವನ್ನೇ ನಗಲಾಗದಷ್ಟು
ನಗಿಸಿ ಹೋದ ನಗುವೆ ನೀನಾರು
ನಾನು ನಾನಾಗಿ ನೀನು ನೀನಾಗಿ
ನನ್ನಲೊಂದಾಗಿ ಬೆರೆತು ನೀನು
ನಾನಾಗಿ ನಾನು ನೀನಾಗಿ ನಲಿದು
ನಿನೇ ನನಗಾಗಿರುವ ನೀನಾರು
No comments:
Post a Comment