Friday, 6 January 2012

ನನ್ನ ಇನಿಯನ ನೆನಪು

ನೂರೆಂಟು ಕನಸು ಮನದಲ್ಲಿ ತುಂಬಿದೆ
ಮಾತುಗಳು ಅದರದಲ್ಲಿ ಅಡಗಿ ಕೂತಿದೆ
ಮನವು ಇನಿಯನ ನೆನಪಲ್ಲಿ ಹಾತೊರೆಯುತಿದೆ
ಪ್ರಿಯನನು ನೆನೆಯುತ ಇನಿಯನ ಅರಸುತಿದೆ


ಕಾಣದ ಗಾಳಿಯೆ ಹಾರುತಾ ಹೋಗೆಲೆ
ಕಾದಿರುವೆ ನಾನು ಅವನ ನೆನಪಲ್ಲೆ
ಅವನ ಬಳಿ ಹೋಗಿ ಹೇಳೆಲೆ
ಕಾದಿಹಳು ನಿನಗಾಗಿ ಈ ಕಮಲೆ

ನೀ ನನ್ನ ಜೀವ ಎಂದೆನು ನಾನು
ಪಟಪಟ ಮಾತಲಿ ಮನವ ಕದ್ದುನವನು
ಪ್ರೇಮವು ಸೋರಿ ಜೀವನ ಸೋತಿದೆ
ಆದರೂ ಬಿಡದೆ ನೆನಪುಗಳು ಕಾಡಿದೆ


ಹಾಗೆ ಸುಮ್ಮನೆ ಬರೆದಿದ್ದು
ಕನಸಲ್ಲಿ

ಕನಸಲ್ಲಿ ಆಗಸಕ್ಕೆ ಹಾರಿ
ನೇಸರನ ಸ್ಪರ್ಶಿಸಿದೆನು
ಕಡಲಾಳಕ್ಕೆ ಜಿಗಿದು
ಚಿಪ್ಪಲ್ಲಿ ಮುತ್ತಾಗಿಹೋದೆ

ಕಾಡಿನ ಮರಗಳಲಿ
ಹಸಿರೆಲೆ ನಾನಾದೆನು
ನಾಟ್ಯದ ವಯ್ಯಾರದಿ
ನಲಿವ ನವಿಲು ನಾನಾಗಿಕುಣಿದೆ

ಕೆಸರಲ್ಲಿ ಧುಮುಕಿ
ಕಮಲದ ಮೇಲೆ ಮಲಗಿದೆ ನಾ
ಇನಿಯನ ನೆನಪಲ್ಲಿ
ಕೋಗಿಲೆ ಕಂಠದಿ ಹಾಡಿದೆ

No comments:

Post a Comment