ಒಂದು ವಿಷ್ಯ ಹೇಳ್ತೀನಿ ನೆನಪಿರಲಿ ಈ ಕೆಳಗಿನ ಮಾತನ್ನ ಪ್ರಯೋಗ ಮಾಡೋಕೆ ಹೋಗಿ ಒದೆ ಬಿದ್ರೆ ನಾನು ಜವಾಬ್ದಾರಳಲ್ಲ
ಓದಿ ಆ ಮೇಲೆ ನೀವು ನಿಮ್ಮಿಷ್ಟ
ಹುಡುಗಿನ ಪ್ರೀತಿ ಮಾಡೋಕೆ ಬೇಕಾದ ಅರ್ಹತೆಗಳು
1. ಮನಸ್ಸು ಸುಂದರವಾಗಿರಬೇಕು
ಹಾಗಂತ lux ಸಾಬೂನು ಹಾಕಿ ಉಜ್ಜುತ್ತಾ ಇರಬೇಡಿ
2. ಅಲ್ಪ ಸ್ವಲ್ಪ style ಮಾಡ್ಬೇಕು
ಹಾಗಂತ ರಜನಿಕಾಂತರ ಸಿನಿಮಾ ನೋಡ್ತಾ ಕೂತುಬಿಡಬೇಡಿ
3. ಜಾಸ್ತಿ ಮಾತಾಡ್ಬೇಕು ಭಯ ಕಡಿಮೆ ಇರಬೇಕು
ಹಾಗಂತ ಉಪೇಂದ್ರ ತರ ಅಂತ ಅಂದ್ಕೊಬೇಡಿ
4. ಆ ಹುಡುಗೀನ ಹೊಗಳ್ತಾ ಇರಿ
ಹಾಗಂತ ಇಡೀದಿನ ಹೊಗಳ್ತಾ ಇದ್ರೆ ಬೋರಾಗುತ್ತೆ
5. ಮುಖದಲ್ಲಿ ಮಂದಹಾಸ ಜಿನುಗುತ್ತಾ ಇರಲಿ
ಸುಮ್ಮಸುಮ್ನೆ ನಗಬೇಡಿ ಹುಚ್ಚರು ಅಂದಕೋತಾಳೆ ಹುಡುಗಿ
6. ಆಕೆನ ನಗಿಸೋಕೆ ಪ್ರಯತ್ನಮಾಡಿ
ಕಚಗುಳಿ ಇಡೋದೇನು ಬೇಡ ಜೋಕ್ ಹೇಳಿ ನಗಿಸಿ
7. ಆಕೆ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇರಿ
ನಟಭಯಂಕರ ವಜ್ರುಮುನಿತರ ನೋಡ್ಬಿಟ್ಟೀರ ಭಯ ಪಟ್ಕೊಂಡು ಓಡೋಗ್ತಾಳೆ
8. ಕವಿತೆ ಕವನ ಅವಳಿಗೆ ಹೇಳ್ತಾ ಇರಿ
ಸ್ವರಚಿತ ಕವನಾನೆ ಹೇಳಿ
ಹಾಗಂತ ಅಮೃತವರ್ಷಿಣಿ ಚಿತ್ರದ ರಮೇಶ್ ತರ ಸಿಕ್ಕಾಪಟ್ಟೆ DEEP ಆಗಿ ಯೋಚಿಸಿ ಬರಿಬೇಕಂತೇನಿಲ್ಲ ಹಾಗೆ ಮನಸಿಗೆ ತೋಚಿದ್ದನ್ನ ಹೇಳಿ ಸಾಕು
ಸದ್ಶಕ್ಕೆ ಇಷ್ಟು ಇದ್ರೆ ಹೋಗಿ ಐ ಲವ್ ಯು ಹೇಳಿ ಆದರೆ
ಅವಳ ಮನಸಲ್ಲಿ ಬೇರೆಯಾರಾದರೂ ಇದ್ದಾರ ಅಂತ ತಿಳಿಕೊಂಡು ನಂತರ ಹೇಳಿ
ಹಾಗೆ ಸಣ್ಣ ಸಲಹೆ
16 ರಿಂದ 18 ರ ಹುಡುಗಿಗೆ ಐ ಲವ್ ಯು ಹೇಳೋಕೆ ಸ್ವಲ್ಪ ಸುಲಭ ಯಾಕಂದ್ರೆ ಅವರ ಮನಸ್ಸು ಬೆಳೆದಿರಲ್ಲ ಹಾಗಂತ ಕೈ ಬೆಳೆದಿರುತ್ತೆ ತಿರುಗಿಸಿ ಹೊಡೆಯೋಕು ಮುಂಚೆ ಓಡೋಕೆ ತಯಾರಾಗಿರಿ
18 ರಿಂದ 20 ಇವರಿಗೆ ಜಾಸ್ತಿ ಮಾತಾಡೋರು style ಮಾಡೋರು ಇಷ್ಟ ಆಗ್ತಾರೆ
21 ರಿಂದ 23 ಇವರಿಗೆ ಜೀವನದ ಚಿಂತೆ ಇರುತ್ತೆ ಹಾಗಾಗಿ ನಿಮ್ಮಲ್ಲಿ ಸಮಯ ಕೇಳ್ತಾರೆ ಆಗ ನಿಮ್ಮಲ್ಲಿ ತಾಳ್ಮೆ ಇರಲಿ
23 ರ ಮೇಲ್ಪಟ್ಟು ಇರುವವರಿಗೆ ಮೇಲಿನ ಎಲ್ಲ ಅರ್ಹತೆ ಹುಡುಕುತ್ತಿರುತ್ತಾರೆ
ಮುಖ್ಯವಾದ ಅಂಶ ನಿಮ್ಮ ಜೋಬು ಯಾವತ್ತೂ ತುಂಬಿರ ಬೇಕು ಯಾಕಂದ್ರೆ ಯಾವ ಸಮಯದಲ್ಲಿ ಏನು ಕೇಳ್ತಾರೊ ಗೊತ್ತಾಗಲ್ಲ ಹಾಗೇ ಕೇಳಿದ್ದು ಎಲ್ಲಾ ಕೊಡಿಸಿದ್ರೆ ನಿಮ್ಮ ಕೈಗೆ ಚಿಪ್ಪೆ ಗತಿ ಹುಶಾರು
This comment has been removed by the author.
ReplyDeleteಹ್ಹ ಹ್ಹ ಹ್ಹ! ಇದನ್ನ ನನ್ನ ಹುಡುಗಿಗೆ ಫಾರ್ವರ್ಡು ಮಾಡಿದೆ, ಅವಳು "ಬರೀ ಬೊಗಳೆ, ಇರೋ ಹಂಗೆ ಇರು, ಆದ್ರೆ 50 ಅಂತ ಹೇಳಿ ಬರಿ 30 currency ಹಾಕ್ಸಿದೀಯಾ ಅಂದುಬಿಟ್ಲು!!!" LOL
ReplyDeleteayyo devre istella kasta padbeka .........nanage avashakate illa yakandre nange maneli nodtare ade hudgige nan madve agodu ....
ReplyDeleteಹನಿಗವನಗಳು ಹೀಗೂ ಇರುತ್ತಾ ಇಷ್ಟೆಲ್ಲಾ ಕಷ್ಟ ಪಡಬೇಕ ಹುಡುಗಿಗಾಗಿ ಇಷ್ಟು ಸರಕಸ್ ಬೇಕ ಮದ್ವೇನೆ ಬೇಡಬಿಡಿ
ReplyDelete